right hand
ನಾಮವಾಚಕ
  1. ಬಲಗೈ.
    1. ಕೆಲಸಕ್ಕೆ ಮೇಲುಗೈಯಾದ ಕಾರಣದಿಂದ ಬಲಗೈ.
    2. ಬಲಗೈ ಕಡೆ; ಬಲಪಕ್ಕ; ಬಲ ಪ್ರದೇಶ, ದಿಕ್ಕು: to one’s right hand ಒಬ್ಬನ ಬಲಗಡೆಗೆ. on one’s right hand ಒಬ್ಬನ ಬಲಪಕ್ಕದಲ್ಲಿ.
    3. (ರೂಪಕವಾಗಿ) ಬಲಭುಜ; ಬಲಗೈ; ಒಬ್ಬನ ಅತ್ಯಂತ ಆಪ್ತನಾದ, ಬಿಟ್ಟಿರಲಾಗದ ಯಾ ಮುಖ್ಯ ಸಹಾಯಕ: his wife has been his right hand in the office for many years ಅವನ ಹೆಂಡತಿ ಅನೇಕ ವರ್ಷಗಳಿಂದ ಕಚೇರಿಯಲ್ಲಿ ಅವನ ಬಲಗೈ ಆಗಿದ್ದಾಳೆ; ಅವನ ಹೆಂಡತಿ ಬಹಳ ವರ್ಷಗಳಿಂದ ಕಚೇರಿಯಲ್ಲಿ ಅವನಿಗೆ ಮುಖ್ಯ ಸಹಾಯಕಳಾಗಿದ್ದಾಳೆ.
    4. ಒಬ್ಬನ ಅನಂತರದ ಅತ್ಯಂತ ಪ್ರಮುಖ ಸ್ಥಾನ.
ಪದಗುಚ್ಛ
  1. give the right hand of fellowship (ಹಸ್ತಲಾಘವ ಕೊಡುವ ಕೈಯಾದ ಕಾರಣದಿಂದ) ಸ್ನೇಹದ ಕೈನೀಡು.
  2. put one’s right hand to work ಕೆಲಸಕ್ಕೆ ತನ್ನ ಬಲಗೈ ಕೊಡು; ಕೆಲಸವನ್ನು ಚೆನ್ನಾಗಿ ಮಾಡಲು ಸಿದ್ಧನಾಗಿರು.